Thursday 23 July 2020

ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ಮಾದರಿ ತಯಾರಿಕೆ

ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ಗ್ರಹಣ ಮಾದರಿ ತಯಾರಿಕೆ.

ಮಕ್ಕಳಿಗೆ ಗ್ರಹಣವು ಹೇಗೆ ನಡೆಯುತ್ತದೆ ಎಂದು  ಸುಲಭವಾಗಿ ಅರ್ಥೈಸಲು ನಾವು ತಯಾರಿಸಿದ ಈ ಮಾದರಿ ಬಳಷ್ಟು ಉಪಯೋಗವಾಗುತ್ತದೆ ಎಂದು ನನ್ನ ಭಾವನೆ. ಇದನ್ನು ತಯಾರಿಸಲು ಕಡಿಮೆ ವೆಚ್ಚದವಸ್ತುಗಳನ್ನು ಬಳಸಲಾಗಿದೆ.
ಹೇಗೆ ಮಾದರಿ ತಯಾರಿಸಬೇಕು ಎಂದು ಹಂತ ಹಂತವಾಗಿ ನೋಡ್ತಾ ಹೋಗೋಣ ಬನ್ನಿ.

ಹಂತ-1 : ಮೊದಲು ನಾವು ಸೂರ್ಯನ ಮಾದರಿ ತಯಾರಿಸಿಕೊಳ್ಳಬೇಕು. ಇದಕ್ಕೆ ಒಂದು ಹಲಗೆಯನ್ನು ತೆಗೆದುಕೊಂಡು ಚಿತ್ರದಲ್ಲಿ ಕಾಣುವಂತೆ ತಯಾರಿಸಿಕೊಳ್ಳಬೇಕು ಅದಕ್ಕೆ ಒಂದು ಬಲ್ಬ್ ನ್ನು ಜೋಡಿಸಬೇಕು. 

ಹಂತ -2: ಇನ್ನೊಂದು ಹಲಗೆಯನ್ನು ತೆಗೆದುಕೊಂಡು ಅದಕ್ಕೆ ಹಾಳಾಗಿರುವ ಅಥವಾ ಹಳೆಯ ಅಥವಾ ಕಡಿಮೆ ಬೆಲೆಯ ಗ್ಲೋಬ್ ಅನ್ನು ಭೂಮಿಯಾಗಿ ಬಳಸಿಕೊಳ್ಳಬೇಕು ತಳಭಾಗದಲ್ಲಿ ಒಂದು ತಂತಿಯನ್ನು ಬಿಗಿದು ಒಂದು ಚೆಂಡನ್ನು ಚಿತ್ರದಲ್ಲಿ ಕಾಣುವಂತೆ ಜೋಡಿಸಬೇಕು.

ಹಂತ 3 : ಚಂಡಿಗೆ ಬಿಳಿಬಣ್ಣ ಬಳಿದು ಚಂದ್ರ ಎಂದು ಹೆಸರಿಸಬೇಕು

  ಎರಡನೇ ಹಂತದಲ್ಲಿ ತಯಾರಿಸಿದ ಚಂದ್ರ (ಚಂಡು) ಹಾಗೂ ಭೂಮಿ,  ಭೂಮಿಯ ಸುತ್ತ ತಿರುಗುವ ಜೋಡಿಸಿಕೊಳ್ಳಬೇಕು
 ಈಗ ನಮ್ಮ ಮಾದರಿ ಬಳಸಲು ತಯಾರಿಗೆ ತಯಾರಾಗಿದೆ 




ಗ್ರಹಣ ನೆರಳು-ಬೆಳಕಿನ ಆಟ ಮಾತ್ರ

        ಗ್ರಹಣ ಎನ್ನುವುದು ಖಗೋಳದಲ್ಲಿ ನಡೆಯುವ ಒಂದು ವಿದ್ಯಮಾನ. ಇದು ಒಂದು ನೆರಳು ಬೆಳಕಿನ ಆಟ ಮಾತ್ರ ಆದರೆ ಇಂದಿನ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ ಗ್ರಹಣ ಬಂದಾಗ ಮಾಧ್ಯಮಗಳು ತಮ್ಮ TRPಗಾಗಿ ಜನರನ್ನು ಭಯಭೀತಗೊಳಿಸುವ ಪ್ರಸಂಗಗಳನ್ನು ಕಾಣುತ್ತೇವೆ. 
ನಾವು ಸೂರ್ಯನನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದೇರೀತಿ ಗ್ರಹಣ ಸಮಯದಲ್ಲಿ ಕೂಡ ಬರಿಗಣ್ಣಿನಿಂದ ನೋಡುವುದು ಅಪಾಯಕಾರಿ. ಈ ಕಾರಣದಿಂದ ಸೂಕ್ತ ತಜ್ಞರು ತಯಾರಿಸಿದ ಕನ್ನಡಕಗಳನ್ನು ಬಳಸುವುದು ಸೂಕ್ತ.


2 comments:

  1. ಸರ್ ನಮಸ್ತೆ... ನಿಮ್ಮ ಬ್ಲಾಗ್ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ಶಿಕ್ಷಕ ವರ್ಗದವರಿಗೆ ಒಳ್ಳೆಯ ಮಾಹಿತಿ ಸಿಗುತ್ತಿದೆ ಸರ್. ನಿಮ್ಮ ಈ ಬ್ಲಾಗ್ ಪ್ರತಿಯೊಬ್ಬರಿಗೂ ಕಲಿಕಾ ಚಟುವಟಿಕೆ ಮಟ್ಟು ಇನ್ನಿತರ ಹಲವು ವಿಷಯಗಳು ಕಲಿಯುವುದಕ್ಕೆ ಪ್ರೇರಣೆ ಅಥವಾ ಅನುಕೂಲವಾಗಿದೆ ಎಂದು ಹೇಳಬಹುದು ಸರ್..
    🙏🙏🙏

    ReplyDelete