Sunday 2 August 2020

ವಿದ್ಯಾಗಮ

https://documentcloud.adobe.com/link/review?uri=urn:aaid:scds:US:a1bd8f88-7aa0-4a7b-b5cc-3c166a254958



📚 *ವಿದ್ಯಾಗಮ ಯೋಜನೆಯ ನಿರಂತರ ಕಲಿಕಾ-ಕಾರ್ಯಕ್ರಮದ  ಉಪಯುಕ್ತ ಮಾಹಿತಿಗಳು : ಇವು ಕೇವಲ ಮಾದರಿಗಾಗಿ/ಮಾಹಿತಿಗಾಗಿ ಮಾತ್ರ .💐🌼🙏


1

ವಿದ್ಯಾಗಮ - ಅನುಷ್ಠಾನದ ಚೆಕ್ ಲಿಸ್ಟ್

2

ವಿದ್ಯಾಗಮ - ಮಾರ್ಗದರ್ಶಿ ಶಿಕ್ಷಕರ ಮಾದರಿ  ವೇಳಾಪಟ್ಟಿ

3

ವಿದ್ಯಾಗಮ - ಮಾರ್ಗದರ್ಶಿ ಶಿಕ್ಷಕರ ದಿನಚರಿ. (ಮಕ್ಕಳ ಸಂಖ್ಯೆ ಹೆಚ್ಚಾಗಿದ್ದಾಗ ಈ ಮಾದರಿ ಅನುಸರಿಸುವುದು)

4

ವಿದ್ಯಾಗಮ - ಮಾರ್ಗದರ್ಶಿ ಶಿಕ್ಷಕರ ದಿನಚರಿ. (ಮಕ್ಕಳ ಸಂಖ್ಯೆ ಕಡಿಮೆ ಇದ್ದಾಗ ಈ ಮಾದರಿ ಅನುಸರಿಸುವುದು)

5

ವಿದ್ಯಾಗಮ - ವಿದ್ಯಾರ್ಥಿಗಳ ಕೃತಿ ಸಂಪುಟ

6

ವಿದ್ಯಾಗಮ-ನಿರಂತರ ಕಲಿಕಾ ಕಾರ್ಯಕ್ರಮ:-

ಮಗುವಿನ ಕೃತಿ ಸಂಪುಟಕ್ಕಾಗಿ ಫೈಲ್ ತಯಾರಿಸುವುದು ಹೇಗೆ?





ಕ್ರಮ
ಸಂಖ್ಯೆ
ವಿದ್ಯಾಗಮ ಪೂರಕ ನಮೂನೆಗಳು, ಮಾದರಿ ಗೃಹಪಾಠಗಳು ಮತ್ತು ಅಭ್ಯಾಸ ಹಾಳೆಗಳುLinks to Download
1ವಿದ್ಯಾಗಮ ಶಿಕ್ಷಕರ ಸಮೀಕ್ಷೆ ನಮೂನೆಗಳುDownload
2ವಿದ್ಯಾಗಮ ಮುಖ್ಯ ಶಿಕ್ಷಕರ ನಮೂನೆಗಳುDownload
3ವಿದ್ಯಾಗಮ ಸಿ ಆರ್ ಪಿ ಅವರ ಸಮೀಕ್ಷೆ ನಮೂನೆಗಳುDownload
4ವಿದ್ಯಾಗಮ- CSAS ಆಧಾರಿತ ಸಾಮರ್ಥ್ಯಗಳ ಪಟ್ಟಿDownload
5ನಲಿ ಕಲಿ ಗೃಹ ಪಾಠದ ಮಾದರಿಗಳು -1Download
6ನಲಿ ಕಲಿ ಗೃಹ ಪಾಠದ ಮಾದರಿಗಳು -2Download
7ನಲಿ ಕಲಿ ಗೃಹ ಪಾಠದ ಮಾದರಿಗಳು -3Download
84ನೇ ತರಗತಿ ಗೃಹ ಪಾಠದ ಮಾದರಿಗಳುDownload
95ನೇ ತರಗತಿ ಗೃಹ ಪಾಠದ ಮಾದರಿಗಳುDownload
106ನೇ ತರಗತಿ ಗೃಹ ಪಾಠದ ಮಾದರಿಗಳುDownload
117ನೇ ತರಗತಿ ಗೃಹ ಪಾಠದ ಮಾದರಿಗಳುDownload
12ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-1Download
13ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-2Download
14ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-3Download
15ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-4Download
16ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-5Download
17ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-6Download
18ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-7Download
19ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-8Download
20ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-9Download
21ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-10Download
22ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-11Download
23ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-12Download
24ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-13Download
25ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-14Download
26ವಿದ್ಯಾಗಮ-ಕರೋನಾ ರಜೆಯ ಗೃಹ ಪಾಠ -15Download
27ವಿದ್ಯಾಗಮ-ಕರೋನಾ ರಜೆಯ ಗೃಹ ಪಾಠ -16Download

ವಿಜ್ಞಾನದ ಸರಳ ಪ್ರಯೋಗಗಳು

ಮಕ್ಕಳಿಗಾಗಿ ವಿಜ್ಞಾನದ ಸರಳ ಪ್ರಯೋಗಗಳು


ಈ ಕೆಳಗಿನ ಲಿಂಕ್ ನಲ್ಲಿ ಸರಳ ಪ್ರಯೋಗಗಳನ್ನು ಹೊಂದಿರುವ ಪಿಡಿಎಫ್ ಇದೆ. ನಿಮಗೆ ಯಾವ ಪ್ರಯೋಗ ಬೇಕೊ, ಆ  ಪ್ರಯೋಗದ ಚಿತ್ರದ ಮೇಲೆ ಕ್ಲಿಕ್ ಮಾಡಿ ನಿಮಗೆ ಪ್ರಯೋಗದ ವಿಡಿಯೋ ಲಭ್ಯವಾಗುತ್ತದೆ.


ಪ್ರಯೋಗ-1
ಆಹಾರ ಪದಾರ್ಥಗಳಲ್ಲಿ ಪಿಷ್ಟ ಇರುವಿಕೆಯನ್ನು ಪತ್ತೆ ಹಚ್ಚುವುದು
ವೀಡಿಯೊ ವೀಕ್ಷಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿರಿ

Saturday 1 August 2020

ನನ್ನ ಮೊದಲ ಶಾಲಾ ವಾರ್ಷಿಕೋತ್ಸವ ಸಮಾರಂಭ

ನನ್ನ ಮೊದಲ ಶಾಲಾ ವಾರ್ಷಿಕೋತ್ಸವ ಸಮಾರಂಭ
ರಾಯಚೂರು ಕಲಿಕೆ ಪತ್ರಿಕೆ ವರದಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಸವೇಶ್ವರ ನಗರ


Friday 31 July 2020

ಅಸೈನ್ಮೆಂಟ್-2

ಅಸೈನ್ಮೆಂಟ್-2
ಶ್ರೀ ಇಸ್ಮಾಯಿಲ್ ಸಾಹೇಬ್ ಪಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಗ್ಗಲದಿನ್ನಿ
ಘಟಕ ಯೋಜನೆ

Thursday 30 July 2020

ಅಸೈನ್ಮೆಂಟ್-7

ಅಸೈನ್ಮೆಂಟ್-7

ಶಿಕ್ಷಕರ ಹೆಸರು - ಶ್ರೀ ಇಸ್ಮಾಯಿಲ್ ಸಾಹೇಬ್ ಪಿ

ನಾವು ಬೋಧಿಸುವ ವಿಷಯ ಹಾಗೂ ತರಗತಿಯ ಬುನಾದಿ ಸಾಮರ್ಥ್ಯಗಳ ಪಟ್ಟಿಮಾಡುವುದು ಹಾಗೂ ಸಾಮರ್ಥ್ಯಗಳಿಗೆ ಅನುಸಾರವಾಗಿ ಪ್ರಶ್ನೆ ಪತ್ರಿಕೆ ರಚನೆ.

ಸೇತುಬಂದ ದಾಖಲೆಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

Wednesday 29 July 2020

ಅಸೈನ್ಮೆಂಟ್-4

ಅಸೈನ್ಮೆಂಟ್-4
ನಾವು ಬೋಧಿಸುವ ವಿಷಯ/ ಕಲಿಕಾಂಶ/ಘಟಕಕ್ಕೆ ಪೂರಕವಾಗಿ ಬೋಧನೋಪಕರಣಗಳ ತಯಾರಿಕೆ.

ಗಾಳಿಯ ಘಟಕಗಳ ಚಿತ್ರಪಟ
ಟಾರ್ಚ್ ನ ರಚನೆ ಹಾಗೂ ಅದರ ಒಳನೋಟ
ವಿಟಮಿನ್ ಹಾಗೂ ಖನಿಜಗಳನ್ನು ತೆಯಿಂದ ಉಂಟಾಗುವ ರೋಗಗಳ ಚಿತ್ರಪಟ.
ಜಲಚಕ್ರದ ಪ್ರಕ್ರಿಯೆಯನ್ನು ತೋರಿಸುವ ಚಿತ್ರ.
ದ್ಯುತಿ ಸಂಶ್ಲೇಷಣೆ ಕ್ರಿಯೆಯ ವಿವರಿಸುವ ಚಿತ್ರಪಟ
ಘಟಕ: ಸಸ್ಯಗಳನ್ನು ತಿಳಿಯುವುದು.
ಎಲೆಯ ಸಮಾಂತರ ವಿನ್ಯಾಸ ಮತ್ತು ಬೇರಿನ ವಿನ್ಯಾಸ ಇರುವ ಚಿತ್ರಪಟ.
ಘಟಕ :ಸಸ್ಯಗಳನ್ನು ತಿಳಿಯುವುದು
ಎಲೆನಾ ಜಾಲಿಕ ಸಿರವಾರ ವಿನ್ಯಾಸ ಮತ್ತು ಬೇರಿನ ರಚನೆ.



ನೀರಿನ ಮೂಲಗಳು

ಅಸ್ಸೈನ್ಮೆಂಟ್ -1

ಅಸೈನ್ಮೆಂಟ್- 1 
ನಾವು ಬೋಧಿಸುವ ವಿಷಯ ಹಾಗೂ ಫಲಿತಾಂಶಕ್ಕೆ ಪೂರಕವಾಗಿ ಆಡಿಯೋ-ವಿಡಿಯೋ ರಚನೆ.
ವರ್ಗ-4
ವಿಷಯ: ಪರಿಸರ ಅಧ್ಯಯನ
ಘಟಕ : ಜಲ ಮಾಲಿನ್ಯ
ಜಲಮಾಲಿನ್ಯ ಕುರಿತಾದ ಸ್ವತಃ ತಯಾರಿಸಿದ ವೀಡಿಯೊ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Tuesday 28 July 2020

ಅಸೈನ್ಮೆಂಟ್ -9

ಅಸೈನ್ ಮೆಂಟ್-9

ವಿಷಯ: ಕೋವಿಡ್ -19ರ ಸಮಯವನ್ನು ಹಾಗೂ ವರ್ಕ್ ಫ್ರಮ್ ಹೋಮ್ ಅವಧಿಯನ್ನು ಬಳಸಿ ನಮ್ಮ ವೃತ್ತಿಪರ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು  ಸಹಾಯಕವಾಯಿತು.

ಈ ಅಸೈನ್ಮೆಂಟ್ ನ ದಾಖಲೆಯನ್ನು ಪಿಡಿಎಫ್ ಫಾರ್ಮೆಟ್ ನಲ್ಲಿ ನೋಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

Monday 27 July 2020

ಸನ್ಮಾನ ಸ್ವೀಕರಿಸಿದ ನೆನಪು

ಸ್ನೇಹಿತರೇ ,
"ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಶಿಕ್ಷಕರ ಸಂಘ ರಾಯಚೂರು ಘಟಕದ ಹಿರಿಯ ದಿಗ್ಗಜರು ಗುರುತಿಸಿ, ಜಿಲ್ಲಾ ಹಂತದಲ್ಲಿ ಸನ್ಮಾನಿಸಿದರು... ಆ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು....

Sunday 26 July 2020

ಅಸೈನ್ಮೆಂಟ್ -5 ಪ್ರಶ್ನಾವಳಿ

ಅಸೈನ್ಮೆಂಟ್-8

ನಾವು ಬೋಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಘಟಕವಾರು ರಸಪ್ರಶ್ನೆ ಅಥವಾ ಪ್ರಶ್ನೆ ಬ್ಯಾಂಕ್ / ಪ್ರಶ್ನಾವಳಿ ರಚಿನೆ.


ಪ್ರಶ್ನಾವಳಿಯ PDF ವೀಕ್ಷಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿರಿ.

Saturday 25 July 2020

ಅಸೈನ್ಮೆಂಟ್ -8

ಅಸೈನ್ಮೆಂಟ್ -8


ಶಿಕ್ಷಕರ ಹೆಸರು:- ಶ್ರೀ ಇಸ್ಮಾಯಿಲ್ ಸಾಹೇಬ್ ಪಿ


ಬೋಧನಾ  ನೈಪುಣ್ಯತೆಯನ್ನು ಹಾಗೂ ವೃತ್ತಿ ದಕ್ಷತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಅಂತರ್ಜಾಲದ ಮುಖಾಂತರ ಅಥವಾ ಯೂಟ್ಯೂಬ್ ಮುಖಾಂತರ ಕನಿಷ್ಠ ಹತ್ತು ವೀಡಿಯೊಗಳನ್ನು ವೀಕ್ಷಿಸಿ ಸಣ್ಣ ಟಿಪ್ಪಣಿ ಬರೆಯಲು ಮಾನ್ಯ ಆಯುಕ್ತರ ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್-8 ಆಗಿತ್ತು.


ಈ ಅಸೈನ್ಮೆಂಟ್ ನ ಪಿಡಿಎಫ್ ದಾಖಲೆಯನ್ನು ವೀಕ್ಷಿಸಲು ಈ ಕೆಳಗೆ ಸೂಚಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.

https://documentcloud.adobe.com/link/review?uri=urn:aaid:scds:US:8cc0fcdd-200f-4095-8daa-c1725e4f6fc8



ಧನ್ಯವಾದಗಳು 
ಸಲಹೆ ಮತ್ತು ಮಾರ್ಗದರ್ಶನ ಕ್ಕೆ ಸ್ವಾಗತ.
                            ಇಂತಿ ನಿಮ್ಮ
                 ಶ್ರೀ ಇಸ್ಮಾಯಿಲ್ ಸಾಹೇಬ್ ಪಿ
                                                   ಸ.ಶಿ
   ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಗ್ಗಲದಿನ್ನಿ.

ನಮ್ಮ ತುಗ್ಗಲದಿನ್ನಿ ಶಾಲೆಯ ದೃಷ್ಟಿ ಮತ್ತು ಧ್ಯೇಯ

ನಮ್ಮ ತುಗ್ಗಲದಿನ್ನಿ ಶಾಲೆಯ ದೃಷ್ಟಿ (Vision) & ನಮ್ಮ ಶಾಲೆಯ ಧ್ಯೇಯ (Our vision) 


ನಮ್ಮ ತುಗ್ಗಲದಿನ್ನಿ ಶಾಲೆಯ ದಾಖಲಾತಿ ಆಂದೋಲನದ ಜಾಹೀರಾತು ಭಿತ್ತಿ ಪತ್ರ.


ಅಸೈನ್ಮೆಂಟ್-10

ಶಿಕ್ಷಕರ ಹೆಸರು:- ಶ್ರೀ ಇಸ್ಮಾಯಿಲ್ ಸಾಹೇಬ್ ಪಿ

ಕೋವಿಡ್ -19 ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟವಾಗಿ ಇರುವಂತೆ ನೋಡಲು ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸುವಂತೆ ಮಾಡಲು ರೂಪರೇಷೆಗಳು.




ಈ ಮೇಲಿನ ವಿಷಯ ಕುರಿತಂತೆ ಪಿಡಿಎಫ್ ಫೈಲ್ ಅನ್ನು ಅಪ್ಲೋಡ್ ಮಾಡಲಾಗಿದೆ. ಅದನ್ನು ವೀಕ್ಷಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 


PGF



Thursday 23 July 2020

ನಮ್ಮ ತುಗ್ಗಲದಿನ್ನಿ ಶಾಲೆಯಲ್ಲಿ ನೆಡೆದ ಮಕ್ಕಳ ಹಬ್ಬದ ವರದಿ

ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಗ್ಗಲದಿನ್ನಿಯಲ್ಲಿ ಬಾಲ ಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಇಲಾಖೆ ರಾಯಚೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ ಮಾನವಿ ಇವರ ಸಹಯೋಗದಲ್ಲಿ ಎರಡು ದಿನಗಳ ಕಾಲ ಮಕ್ಕಳ ವಿಜ್ಞಾನ ಹಬ್ಬವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಸಂಪನ್ಮೂಲ ವ್ಯಕ್ತಿಗಳು, ಭಾಗವಹಿಸಿ ಪ್ರೋತ್ಸಾಹಿಸಿದ ಹಿರಿಯರಿಗೂ ಶಿಕ್ಷಣ ಪ್ರೇಮಿಗಳಿಗೂ ಜನಪ್ರತಿನಿಧಿಗಳಿಗೂ, ಶಿಕ್ಷಕ ಸಂಘಟನೆ ಪದಾಧಿಕಾರಿಗಳಿಗೂ, ಊರಿನ ಗ್ರಾಮಸ್ಥರಿಗೂ ಕಾರ್ಯಕ್ರಮಕ್ಕೆ ಶ್ರಮಿಸಿದ ನಮ್ಮ ಶಿಕ್ಷಕರು ವೃಂದಕ್ಕೂ ತುಂಬು ಹೃದಯದ ಧನ್ಯವಾದಗಳು.
ಕಾರ್ಯಕ್ರಮವು ನಮ್ಮ ಗ್ರಾಮದಲ್ಲಿ ಮೆರವಣಿಗೆ ಮುಖಾಂತರ ಪ್ರಾರಂಭವಾಗಿ ಗಣ್ಯರಿಂದ ಉದ್ಘಾಟನೆಗೊಂಡು ಎರಡು ದಿನಗಳ ಕಾಲ ವೈಚಾರಿಕ, ತಾತ್ವಿಕ ಹಿನ್ನೆಲೆಯನ್ನು ಒಳಗೊಂಡಿರುವ, ಮೂಢನಂಬಿಕೆಗಳನ್ನು ವಿರೋಧಿಸುವ, ಯೋಗ ದಾರಿತ , ಪರಿಸರ ಜಾಗೃತಿ ಮೂಡಿಸುವ ಚಟುವಟಿಕೆಗಳ ಮೂಲಕ ಮಕ್ಕಳನ್ನು ಸೂರೆಗೊಂಡಿತವು...


ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ಮಾದರಿ ತಯಾರಿಕೆ

ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ಗ್ರಹಣ ಮಾದರಿ ತಯಾರಿಕೆ.

ಮಕ್ಕಳಿಗೆ ಗ್ರಹಣವು ಹೇಗೆ ನಡೆಯುತ್ತದೆ ಎಂದು  ಸುಲಭವಾಗಿ ಅರ್ಥೈಸಲು ನಾವು ತಯಾರಿಸಿದ ಈ ಮಾದರಿ ಬಳಷ್ಟು ಉಪಯೋಗವಾಗುತ್ತದೆ ಎಂದು ನನ್ನ ಭಾವನೆ. ಇದನ್ನು ತಯಾರಿಸಲು ಕಡಿಮೆ ವೆಚ್ಚದವಸ್ತುಗಳನ್ನು ಬಳಸಲಾಗಿದೆ.
ಹೇಗೆ ಮಾದರಿ ತಯಾರಿಸಬೇಕು ಎಂದು ಹಂತ ಹಂತವಾಗಿ ನೋಡ್ತಾ ಹೋಗೋಣ ಬನ್ನಿ.

ಹಂತ-1 : ಮೊದಲು ನಾವು ಸೂರ್ಯನ ಮಾದರಿ ತಯಾರಿಸಿಕೊಳ್ಳಬೇಕು. ಇದಕ್ಕೆ ಒಂದು ಹಲಗೆಯನ್ನು ತೆಗೆದುಕೊಂಡು ಚಿತ್ರದಲ್ಲಿ ಕಾಣುವಂತೆ ತಯಾರಿಸಿಕೊಳ್ಳಬೇಕು ಅದಕ್ಕೆ ಒಂದು ಬಲ್ಬ್ ನ್ನು ಜೋಡಿಸಬೇಕು. 

ಹಂತ -2: ಇನ್ನೊಂದು ಹಲಗೆಯನ್ನು ತೆಗೆದುಕೊಂಡು ಅದಕ್ಕೆ ಹಾಳಾಗಿರುವ ಅಥವಾ ಹಳೆಯ ಅಥವಾ ಕಡಿಮೆ ಬೆಲೆಯ ಗ್ಲೋಬ್ ಅನ್ನು ಭೂಮಿಯಾಗಿ ಬಳಸಿಕೊಳ್ಳಬೇಕು ತಳಭಾಗದಲ್ಲಿ ಒಂದು ತಂತಿಯನ್ನು ಬಿಗಿದು ಒಂದು ಚೆಂಡನ್ನು ಚಿತ್ರದಲ್ಲಿ ಕಾಣುವಂತೆ ಜೋಡಿಸಬೇಕು.

ಹಂತ 3 : ಚಂಡಿಗೆ ಬಿಳಿಬಣ್ಣ ಬಳಿದು ಚಂದ್ರ ಎಂದು ಹೆಸರಿಸಬೇಕು

  ಎರಡನೇ ಹಂತದಲ್ಲಿ ತಯಾರಿಸಿದ ಚಂದ್ರ (ಚಂಡು) ಹಾಗೂ ಭೂಮಿ,  ಭೂಮಿಯ ಸುತ್ತ ತಿರುಗುವ ಜೋಡಿಸಿಕೊಳ್ಳಬೇಕು
 ಈಗ ನಮ್ಮ ಮಾದರಿ ಬಳಸಲು ತಯಾರಿಗೆ ತಯಾರಾಗಿದೆ 




ಗ್ರಹಣ ನೆರಳು-ಬೆಳಕಿನ ಆಟ ಮಾತ್ರ

        ಗ್ರಹಣ ಎನ್ನುವುದು ಖಗೋಳದಲ್ಲಿ ನಡೆಯುವ ಒಂದು ವಿದ್ಯಮಾನ. ಇದು ಒಂದು ನೆರಳು ಬೆಳಕಿನ ಆಟ ಮಾತ್ರ ಆದರೆ ಇಂದಿನ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ ಗ್ರಹಣ ಬಂದಾಗ ಮಾಧ್ಯಮಗಳು ತಮ್ಮ TRPಗಾಗಿ ಜನರನ್ನು ಭಯಭೀತಗೊಳಿಸುವ ಪ್ರಸಂಗಗಳನ್ನು ಕಾಣುತ್ತೇವೆ. 
ನಾವು ಸೂರ್ಯನನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದೇರೀತಿ ಗ್ರಹಣ ಸಮಯದಲ್ಲಿ ಕೂಡ ಬರಿಗಣ್ಣಿನಿಂದ ನೋಡುವುದು ಅಪಾಯಕಾರಿ. ಈ ಕಾರಣದಿಂದ ಸೂಕ್ತ ತಜ್ಞರು ತಯಾರಿಸಿದ ಕನ್ನಡಕಗಳನ್ನು ಬಳಸುವುದು ಸೂಕ್ತ.


1 ರಿಂದ 10 ನೇ ತರಗತಿ ವರೆಗೆ ಕನ್ನಡ ವಿಷಯದ ಇಲಾಖೆ ಪ್ರಕಟಣೆ ಮಾಡಿದ ಕಲಿಕಾ ಮಾಪಕಗಳು.

1 ರಿಂದ 10 ನೇ ತರಗತಿ ವರೆಗೆ ಕನ್ನಡ ವಿಷಯದ ಇಲಾಖೆ ಪ್ರಕಟಣೆ ಮಾಡಿದ ಕಲಿಕಾ ಮಾಪಕಗಳು.

ಲಿಂಕ್ ಕ್ಲಿಕ್ ಮಾಡಿ ನೋಡಿ

6ನೇ ತರಗತಿ ಕನ್ನಡ ಪಠ್ಯದ ಕ್ಷೇತ್ರಗಳು, ಸಾಮರ್ಥ್ಯಗಳು, ಹಾಗೂ ಕಲಿವಿನ ಫಲಗಳನ್ನು ಆಧರಿಸಿ ಕೈಗೊಳ್ಳಬಹುದಾದ ಚಟುವಟಿಕೆಗಳು.

6ನೇ ಪಠ್ಯದ ಕ್ಷೇತ್ರಗಳು ಸಾಮರ್ಥ್ಯಗಳು ಹಾಗೂ ಕಲಿವಿನ ಫಲ ಗಳನ್ನು ಆಧರಿಸಿ ಕೈಗೊಳ್ಳಬಹುದಾದ ಚಟುವಟಿಕೆಗಳು

ಕ್ಷೇತ್ರಗಳು, ಸಾಮರ್ಥ್ಯಗಳು, ಕಲಿವಿನ ಫಲಗಳನ್ನು ಅನುಲಕ್ಷಿಸಿ ಕೈಗೊಳ್ಳಬಹುದಾದ ಚಟುವಟಿಕೆಗಳ ಲಿಂಕ್

Wednesday 22 July 2020

ಗಣರಾಜ್ಯೋತ್ಸವದ ಅಂಗವಾಗಿ ಗ್ರಾಮದ ಹೃದಯ ಭಾಗದಲ್ಲಿ ಮಕ್ಕಳಿಂದ ಮಾಡಿಸಿದ ನೃತ್ಯ.

2020 ರ ಗಣರಾಜ್ಯೋತ್ಸವದಂದು ನಮ್ಮ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಟೋಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ಮಕ್ಕಳಿಂದ ನೃತ್ಯದ ತುಣುಕು

ವೀಡಿಯೊ ವೀಕ್ಷಿಸಲು ಕೆಳಗೆ ಕ್ಲಿಕ್ ಮಾಡಿ

ಶೈಕ್ಷಣಿಕ ವಿಡಿಯೋಗಳನ್ನು ತಯಾರಿಸಲು ಸಹಾಯಕವಾಗುವ ಮೊಬೈಲ್ ಆಪ್ ಗಳ ಲಿಂಕುಗಳು

ನಮ್ಮ ಕಲಿಕೆ ಹಾಗೂ ಬೋಧನಾಪ್ರಕ್ರಿಯೆಗೆ ತಂತ್ರಜ್ಞಾನ ಬಳಕೆ ಮಾಡಿ ಮೊಬೈಲ್ ಮೂಲಕ ಪಾಠಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ರಚಿಸಲು ಈ ಕೆಳಗಿನ mobile app ಗಳು ಸಹಾಯ ಮಾಡಬಹುದು ಅವುಗಳ ಲಿಂಕ್ ಗಳನ್ನು ಶೇರ್ ಮಾಡಲಾಗಿದೆ ಬೇಕಾದವರು ಉಪಯೋಗಿಸಿಕೊಳ್ಳಿ. ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದ್ದರೆ comment ಮೂಲಕ ನಮಗೆ ದಯವಿಟ್ಟು ಹೇಳಿ.

1. Shelvi app : text ವಿಡಿಯೋ ಮಾಡಲು ಅಥವಾ  wordpad text ನೋಡುತ್ತಾ ವಿಡಿಯೋ ಮಾಡಲು ಸಹಾಯವಾಗುತ್ತದೆ

2. Speachway app : app ಕೂಡ documents ಟೆಕ್ಸ್ಟ್ ನೋಡಿ ವಿಡಿಯೋ ಮಾಡಲು ಸಹಾಯವಾಗುತ್ತದೆ.



3. PPTX TO VIDEO :   ಈ app ನಾವು ತಯಾರಿಸಿದ PPTX ಜೊತೆಗೆ ನಮ್ಮ ವಾಯ್ಸ್ ರೆಕಾರ್ಡ್ ಮಾಡಿ  ವಿಡಿಯೋ ಮಾಡಲು ಸಹಾಯವಾಗುತ್ತದೆ.


4. OFFICE : Microsoft office ಈ app ಮೊಬೈಲ್ ಮೂಲಕ ಸರಳವಾಗಿ PPT create ಸಹಕಾರಿ, ಹಾಗೆ ಇದರಲ್ಲಿ ರಚಿಸಬಹುದು.
ಇದೇ ರೀತಿ ಅನೇಕ ಇವೆ ಇಷ್ಟ ವಾದವನ್ನು ಬಳಸಬಹುದು.